ಹುಬ್ಬಳ್ಳಿ ಜಂಕ್ಷನ್ ರೈಲ್ವೇ ನಿಲ್ದಾಣ ಅಧಿಕೃತವಾಗಿ ಶ್ರೀ ಸಿದ್ಧಾರೋಧ ಸ್ವಾಮೀಜಿ ರೈಲ್ವೆ ನಿಲ್ದಾಣ - ಹುಬ್ಬಳ್ಳಿ. ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯದ ಮುಖ್ಯ ಕಚೇರಿಯಿದೆ ಹಾಗೂ ಒಂದು ಶತಮಾನಕ್ಕೂ ಹಳೆಯದಾದ ರೈಲ್ವೆ ಕಾರ್ಯಾಗಾರವನ್ನು ಹೊಂದಿದೆ. ಅಮೇರಿಕದ ಜನರಲ್ ಮೋಟರ್ಸ್ ಕಂಪನಿಯಿಂದ ಆಮದು ಮಾಡಿಕೊಂಡಿರುವ ರೈಲ್ವೆ ಇಂಜಿನ್ನುಗಳ ನಿರ್ವಹಣೆ ಮತ್ತು ದುರಸ್ತಿಯ ಅತ್ಯಾಧುನಿಕ ಕಾರ್ಯಾಗಾರವನ್ನು ಸಹ ಹೊಂದಿದೆ.